K1N ಡೆಸ್ಕ್ : ಯಾವ ಕನಸು ನಿದ್ದೆ ಮಾಡುವಾಗ ಬೀಳುವುದೊ ಅದು ಕನಸಲ್ಲ. ಆದರೆ ನಿದ್ದೆ ಮಾಡಲೂ ಬಿಡುವುದಿಲ್ಲವೂ ಅದು ಕನಸು. ನಿಜ ಕಾಡುವ ಕನಸು ಸಾಧನೆ ಮಾಡುವ ಹಾಗೆ ಮಾಡುತ್ತೇ ಅಲ್ವೇ. ಹೌದು ಅವತ್ತು ಕ್ಯಾಂಟಿನ್ನಲ್ಲಿ ಸ್ನೇಹಿತರೆಲ್ಲ ಗೀರಮಿಟ್ ಮಿರ್ಚಿ ಬಜ್ಜಿ ತಿನ್ನುತ್ತಾ ಬೈಟು ಚಹಾ ಕುಡಿಯುತ್ತಿದ್ದೇವು. ಮಾತಿಗಿಳಿದ ಅರುಣ ಎರಡು ಸೆಮೇಸ್ಟರ ಕಳೇದು ಹೋಗಿವೆ ಇನ್ನೂ ಒಂದು ಶಾರ್ಟ ಫೀಲ್ಮ ಮಾಡಿಲ್ಲ ಈಗಲಾದರೂ ಮಾಡಬೇಕು ಅಂದ.
ಆತನೇ ಕಥೆ ಹೆಣೆಯುತ್ತೇನೆ ಎಂದು ಹೇಳಿದಾಗ ಅದಕ್ಕೆ ಚೇತನ ನಾನು ನಿರ್ದೇಶನ ಮತ್ತು ಎಡಿಟಿಂಗ್ ಮಾಡ್ತೀನಿ ಎಂದನು. ಹಾಗೆ ಗಿರೀಶ ಛಾಯಾಗ್ರಹಣ ಮಾಡಲಿಕ್ಕೆ ರೆಡಿ ಎಂದು ಹೇಳಿದಾಗ ಕಥೆಯ ಬಗ್ಗೆ ಹುಡುಕಾಟ ನೆಡೆಯಿತು. “೦”.ಬಜೆಟ್ ನಲ್ಲಿ ಶಾರ್ಟ ಫೀಲ್ಮ ಮಾಡಬೇಕು ಅಂದುಕೊಂಡೇವು! ಎಲ್ಲರೂ ಒಂದೂಂದು ಜವಾಬ್ದಾರಿ ವಹಿಸಿಕೊಂಡೆವು. ಕಥೆ ಹುಟ್ಟಿದ್ದೇ ನ್ಯಾನೂ ಕಾರ್ನಲ್ಲಿ ಮಾತಾಡುತಾ ಹೋರಟಾಗ. ಅದು ಒಂದು ಮೂಲೆಯ ಟೇಬಲ್ ಕುರ್ಚಿಯದಾಗಿತ್ತು. ಅದು ಮೊದಲು ಸ್ನೇಹಿತರ ಬಗ್ಗೆ ಹೆಣೆದಿತ್ತು. ಆ ಕಥೆ ಬದಲಾವಣೆ ಹೊಂದುತ್ತಾ ಬೆಳೆಯುತ್ತಾ ಹೋಯಿತು. ಟೇಬಲ್ ಕಥೆಯ ಬೆನ್ನೇಲಬು ಆಗಿ ನಿಂತುಕೊಂಡಿತು. ಅದುವೇ ನಮ್ಮ ಫೀಲ್ಮ ಕಾರ್ನರ್ ಟೇಬಲ್.
ಎಲ್ಲರೂ ಕಾಲೇಜಿಗೆ ಹೋರಟೆವು ಕ್ಲಾಸ್ ಶುರುವಾಗುದು ಇನ್ನ ಅರ್ಧ ಗಂಟೆ ಇತ್ತು. ಚೇತನ್ ಹೋಗಿ ನೋಟಿಸ ಬೋರ್ಡ ನೋಡುತ್ತಾ ನಿಂತು ನಮ್ಮನ್ನೇಲ್ಲಾ ಕರೆದ. ಹೋಗಿ ನೋಡಿದರೆ ಡಿ.ಜಿ ವೈಷ್ಣವ ದೃಶ್ಯ ಮಾಧ್ಯಮ ಕಾಲೇಜು ಚನೈ ಇವರ ಜ್ಯೂನಿಯರ್ ಫೀಲ್ಮ ಮೇಕರ ಸ್ಪರ್ಧೆ ಏರ್ಪಡಿಸಿದ್ದಾಗಿ ತಿಳಿತು. ಈ ಸ್ಪರ್ಧೆಯಲ್ಲಿ ಭಾಗವಹಿಸೋಣ ನಮ್ಮ ಕನಸಿಗೆ ಒಂದು ಅವಕಾಶ ದೊರತಿದೆ ಎಂದು ಶಾರ್ಟ ಫೀಲ್ಮ ತೆಗೆಯಲು ಸಿದ್ದರಾದೇವು. ಕಥೆ ಬರದಿಂದ ಶುರುವಾಯಿತು ಕಥೆ ಹೆಣೆದು ವಿಭಾಗದ ಗುರುಗಳಿಗೆ ತೋರಿಸಿದಾಗ ಅವರು ಕಥೆಯ ಬಗ್ಗೆ ಸ್ವಲ್ಪ ಗೈಡ ಮಾಡಿದರು. ಕತೆಯ ಸಂಭಾಷನೆ ರೋಹಿತ ಬರೆದನು. ಬರದಿಂದ ಒಂದು ವಾರಗಳ ಕಾಲ ಶೂಟಿಂಗ್ ಶುರು ಮಾಡಿದೇವು. ಬೆಳಿಗ್ಗೆ ಕ್ಲಾಸ್ ಮುಗಿಸಿ ಕೊಂಡು ಸ್ವಲ್ಪ ಟಿಪೀನ್ ಮಾಡಿ ಎರಡರಿಂದ ರಾತ್ರಿ ಒಂಬತ್ತರವರೆಗೆ ಶೂಟಿಂಗ್ನಲ್ಲಿ ನೀರತರಾಗಿದ್ದೆವು. ಅಂದ ಹಾಗೆ ಈ ಫೀಲ್ಮನಲ್ಲಿ ನಾವೇ ಪಾತ್ರಧಾರಿಗಳು, ಲೈಟಮ್ಯಾನಗಳು, ಮೇಕಫ್ ಮ್ಯಾನ್ಗಳು ಎಲ್ಲವೂ ನಾವೇ. “೦” ಬಜೆಟ್ನಲ್ಲಿ ಒಬ್ಬರಿಗೂಬ್ಬರಿಗೆ ಸಹಾಯ ಸಹಕಾರ ದಿಂದ ಶೂಟಿಂಗ್ ಮಾಡಿದೆವು.
ಈ ಶಾರ್ಟ ಫೀಲ್ಮ ತೆಗಯುವಾಗ ಆದ ಅನುಭವ ಒಂದೊಂದು ಸನ್ನಿವೇಶ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತದೆ. ಹೋರಾಂಗಣ ಚಿತ್ರೀಕರಣ ವೇಳೆಯಲ್ಲಿ ಆದ ಹೊಸ ಅನುಭವ ನಮಗೆ ಹೇಳತಿರದು. ಏನೇ ಆದರೂ ಹೊಸ ಕನಸಿನಲಿ ಈ ಕೀರು ಚಿತ್ರ ತೆಗೆದೆ ತಿರುತ್ತೇವೆ ಎಂಬ ಅಚಲ ಹಂಬಲ ಹುಂಬತನದಿಂದ ತೆಗೆದೆವು. ಚಿತ್ರ ಪೂರ್ಣಗೊಂಡಾಗ ಸ್ವಲ್ಪ ಭಯ ಕಾಡುತ್ತಿತ್ತು. ಹೇಗೆ ಚಿತ್ರ ಮೂಡಿಬರುತ್ತೇ ಎಂದು ಆದರೂ ನಮ್ಮ ನಿರ್ದೇಶಕ ಚೇತನ ಕೈಚಳಕದ ಎಡಿಟಿಂಗ್ದಿಂದಾಗಿ ಕಲಾತ್ಮಕ ಕೀರು ಚಿತ್ರವಾಗಿ ಹೊರಹೊಮ್ಮಿತು. ಅದರಂತೆ ಈ ಚಿತ್ರದಲ್ಲಿ ಹದಿನಾರು ಪಾತ್ರಗಳಿವೆ. ಒಬ್ಬಬ್ಬರೂ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದರಲ್ಲಿ ಮಾಸ್ಟರ್ ಸಾಗರ ಎಂಬ ಹುಡುಗ ಕೊಡ ಪಾತ್ರ ನಿರ್ವಹಿಸಿದ್ದಾನೆ. ಅದರಂತೆ ಈ ಹೊಸ ಕಥೆಯು ನಮ್ಮ ಬದುಕಿನ ವಿವಿಧ ಮಜಲುಗಳ ಚಿತ್ರಣವನ್ನು ತರೆದಿಡುವ ಪುಸ್ತಕವಾಗಿದಂತೂ ನಿಜ. ಒಂದೊಂದು ಪಾತ್ರಗಳು ಪ್ರತಿಯೊಬ್ಬರ ಅಂತರಂಗರವನ್ನು ಬಿಚ್ಚಿಡುತ್ತವೆ. ದಿ ಕಾರ್ನರ ಟೀಬಲ್ ಕಥೆಯ ತಿರುಳು ನಮ್ಮ ಜೀವನದ ವಸ್ತು ಸ್ಥಿತಿಯನ್ನು ಎತ್ತಿಹಿಡಿದಿದೆ. ಇಲ್ಲಿ ಕನಸು, ಭರವಸೆ, ಖುಷಿ, ವ್ಯವಸ್ಥೆ, ಅರ್ಪನಾ ಮನೋಭಾವ, ಕಾಳಜಿ, ಪ್ರೀತಿ ಸ್ನೇಹ ಹೀಗೆ ಎಲ್ಲ ರೀತಿಯಾಗಿ ಬೆಳಕು ಚಲ್ಲುವ ಬಹುಮುಖಿಯ ಚಿತ್ರವಾಗಿದೆ.
ಒಟ್ಟಾರೆಯಾಗಿ ನಮ್ಮ ಫೀಲ್ಮ ದಿ ಕಾರ್ನರ ಟೇಬಲ್ ಕಲ್ಪನೆಯ ಬೆನ್ನೆತ್ತಿ ಸಮಾಜದ ಮುಖಗಳನ್ನು ತೆರೆಯ ಮೇಲೆ ಬರುವಂತೆ ಕೀರು ಚಿತ್ರ ಮಾಡಿದ್ದೇವು. ಜೀವನದಲ್ಲಿ ಏನಾದರೂಂದು ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಬೇಕು. ಎಂಬ ಹಂಬಲದಿಂದ ಈ ಚಿತ್ರ ತೆಗೆದೇವು. ಖುಷಿಯಲ್ಲಿ ತೇಲಿದೇವು. ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ.
ಥ್ಯಾಂಕ್ಸ್ ಟೂ ಎಂ.ಸಿ.ಜಿ…