ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ಮುಹೂರ್ತ ಬಂದಿದ್ರೂ ಬಿಜೆಪಿಯಲ್ಲಿ ಟಿಕೆಟ್ ಮುಸುಕಿನ ಗುದ್ದಾಟ ಬಗೆಹರಿದಿಲ್ಲ. ಆರಂಭಗೊಂಡಾಗಿನಿಂದಲೂ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಗ್ಗಂಟಾಗುತ್ತಲೇ ಬಂದಿದ್ದು, ಕೊನೆ ಘಳಿಗೆ ಸಮೀಪಿಸಿದರೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಬಂಡಾಯದ ಬಿಸಿ
ಕಮಲ ಟಿಕೆಟ್ ಹಂಚಿಕೆಗಾಗಿ ರಾಜ್ಯ ನಾಯಕ ಸುರಾನಾ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಬೇಕೆಂಬ ಅವರ ಉದ್ದೇಶ ಅಷ್ಟು ಸುರಳಿತವಾಗಿ ಈಡೇರಲು ಜಿಲ್ಲಾ ನಾಯಕರು ಬಿಡಲಿಲ್ಲ. ಅಲ್ಲದೇ, ಬಣ ರಾಜಕೀಯ ಅಂತಿಮ ಕ್ಷಣದವರೆಗೂ ಅಭ್ಯರ್ಥಿ ಆಯ್ಕೆ ಕಸರತ್ತು ಅಂತ್ಯಗೊಳ್ಳಲಿಲ್ಲ.
ಮಾಸ್ಟರ್ ಪ್ಲಾನ್
ಕಮಲ ಅಭ್ಯರ್ಥಿ ಪಟ್ಟಿ ಅಂತಿಮಗೊಂಡಿದ್ದು, ಅಂತಿಮ ಕ್ಷಣದವರೆಗೂ ಬಹಿರಂಗ ಮಾಡದಂತೆ ತೀರ್ಮಾನಿಸಲಾಗಿದೆ. ನಾಮಪತ್ರ ಸಲ್ಲಿಕೆ ಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇರುವಾಗ ಒಟ್ಟಾಗಿ ಆಗಮಿಸಿ ನಾಮಪತ್ರ ಸಲ್ಲಿಸಲು ಯೋಚಿಸಲಾಗಿದೆ ಎಂದು ಹಿರಿಯ ಮುಖಂಡರು ಕೆಒನ್ನ್ಯೂಸ್ಗೆ ಮಾಹಿತಿ ತಿಳಿಸಿದ್ದಾರೆ.