ವಿಜಯಪುರ: ವಿಜಯಪುರ ನಗರದ ವಾರ್ಡ್ ನಂ.24 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಮಲಾ ರಫೀಕ್ ಅಹ್ಮದ್ ಖಾನೆ ತಮ್ಮ ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಸಿದರು.
ವಿಜಯಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಾಮಪತ್ರ ಸಲ್ಲಿಸಿದರು.
ತದನಂತರ ಮಾತನಾಡಿದ ಅವರು, ಜನರ ಸಂಕಷ್ಟಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ವಿಮಲಾ ಖಾನೆ ಹೇಳಿದರು. ವಾರ್ಡ್ ನಂಬರ 24ರ ಪಕ್ಷೇತರ ಅಭ್ಯರ್ಥಿಯಾಗಿ ಜನರ ಸೇವೆ ಮಾಡುತ್ತೇನೆ. ಜನರ ಸಮಸ್ಯೆ ನಿವಾರಣೆಗಾಗಿ ನನ್ನ ಪ್ರಥಮ ಆದ್ಯತೆ ಆಗಿದೆ. ಮಹಾಜನತೆ ನನಗೆ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸಿ ಎಂದರು.