ವಿಜಯಪುರ: ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷದಲ್ಲಿ ಬಂಡಾಯ ಬಿರುಗಾಳಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.
ಇನ್ನು ಮಹಾನಗರ ಪಾಲಿಕೆಯ ಮೊದಲ ಮೇಯರ್ ಇದೀಗ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಾಂಗ್ರೆಸ್ಗೆ ಚೆಕ್ ಮೇಟ್ ನೀಡಿದ್ದಾರೆ.
ಹೌದು..! ಮಹಾನಗರ ಪಾಲಿಕೆಯ ವಾರ್ಡ್ ನಂಬರ 26ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಜ್ಜಾದೇಪೀರಾ ಮುಶ್ರಿಫ್ ಹೆಸರು ಫೈನಲ್ ಆಗಿತ್ತು. ಆದ್ರೇ, ಕೊನೆ ಕಣದಲ್ಲಿ ಚದುರಂಗ ಆಟವಾಡಿ ತಮ್ಮ ಸುಪುತ್ರ ಸಮೀರ ಮುಶ್ರಿಫ್ಗೆ ‘ಬಿ’ ಫಾರ್ಮ್ ನೀಡಿ ತಾವು ಪಕ್ಷೇತರ ಅಭ್ಯರ್ಥಿಯಾಗಿ ವಾರ್ಡ್ ನಂಬರ 29ಕ್ಕೆ ಇಳಿದು ಕಾಂಗ್ರೆಸ್ಗೆ ಕೈ ಕೊಟ್ಟಿದ್ದಾರೆ. ಇನ್ನು ಮಹಾ ಚುನಾವಣೆಯ ಫಲಿತಾಂಶ ಬಳಿಕ ಮತ್ಯಾವ್ ರಾಜಕೀಯ ಚಟುವಟಿಕೆಗಳು ಆಗುತ್ತೇವೆ ಎಂದು ಕಾಯ್ದುನೋಡಬೇಕಿದೆ.