ವಿಜಯಪುರ: ಯುವ ಪೀಳಿಗೆ ಎಐಎಂಐಎಂ ಪಕ್ಷದ ಪರ ಬೆಂಬಲ ಇದೆ ಎಂದು ಎಐಎಂಐಎಂ ಮುಖಂಡ ಕೈಸರಹುಸೇನ ಇನಾಮದಾರ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಎಐಎಂಐಎಂ ಅಧ್ಯಕ್ಷ ಓವೈಸಿ ಪರ ವಿಜಯಪುರದಲ್ಲಿ ಭಾರಿ ಅಲೆ ಇದೆ. ಅದಕ್ಕಾಗಿ ಯುವ ಪೀಳಿಗೆ ಸಕತ್ ಬೆಂಬಲ ನೀಡುತ್ತಿದ್ದಾರೆ. ಅಲ್ಲದೇ, ಬರುವ ಅಕ್ಟೋಬರ್ 25ಕ್ಕೆ ಅಧ್ಯಕ್ಷ ಓವೈಸಿ ಅವರು ವಿಜಯಪುರಕ್ಕೆ ಆಗಮಿಸುತ್ತಾರೆ.
ಅದಕ್ಕಾಗಿ ಈಗಾಗಲೇ ಕಲಬುರಗಿ, ಬಾಗಲಕೋಟ ಬೆಂಬಲಿಗರು ಕಾಲ್ ಮಾಡುತ್ತಿದ್ದು ಸಂತಸ ತಂದಿದೆ. ಅಲ್ಲದೇ, ವಾರ್ಡ್ ನಂಬರ 28ರ ಅಭ್ಯರ್ಥಿ ಹಾಗೂ ನನ್ನ ಧರ್ಮಪತ್ನಿ ರೀಜವಾನಾ ಬಾನು ಕೈಸರಹುಸೇನ್ ಇನಾಮದಾರ್ಗೆ ಮತ ನೀಡಿ ಎಂದು ಮನವಿ ಮಾಡಿದರು. ಇನ್ನೂ ವಾರ್ಡ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಭಿವೃದ್ಧಿಗಾಗಿ ಎಐಎಂಐಎಂಗೆ ಮತ ನೀಡಿ ಎಂದು ಮನವಿ ಮಾಡಿದರು.