ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನ್ಯೂನತೆ ಹಾಗೂ ಅಕ್ರಮ ಆಗದಂತೆ ಸೂಕ್ತ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರತಿ ಮತಗಟ್ಟೆಗೆ ಪೊಲೀಸ ನಿಯೋಜನೆ ಮಾಡಲಾಗಿದ್ದು, ಅಲ್ಲದೇ, 33 ಸೆಕ್ಟರ್ ಮೊಬೈಲ್ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗೆ 12 ಸಿಪಿಐ, 6 ಡಿವೈಎಸ್ಪಿ, ಅಡಿಸನ್ ಎಸ್ಪಿ ಸೇರಿದಂತೆ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ಅದಕ್ಕಾಗಿ ಯಾರು ಅಹಿತಕರ ಘಟನೆಗಳು ಆಗದಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ ಇಲಾಖೆಯೊಂದಿಗೆ ಕೈ ಜೋಡಿಸಿ ಹಬ್ಬದ ಚುನಾವಣೆ ಮಾಡೋಣ ಎಂದರು.