ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಆದ್ರೇ, ಕೆಲವರು ಈಗಾಗಲೇ ಸೋಲು ಒಪ್ಪಿಕೊಳ್ಳುವಂತಹ ಸ್ಟೇಟ್ಸ್ನ ಹಾಕಿಕೊಳ್ಳುವ ಮೂಲಕ ತಮ್ಮ ಆಪ್ತರ ವಿರುದ್ಧ ಅಸಮಾಧಾನ ಹಾಕುತ್ತಿದ್ದಾರೆ.
ಇದು ಕಲಿಯುಗ.. ಅದರಲ್ಲೂ ಮಾಯಾಜಾಲದ ಯುಗ ಆಗಿದೆ. ಒಂದು ಕ್ಷಣ ತಮ್ಮ ಬಗ್ಗೆ ಅಥವಾ ಆಪ್ತರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಅಥವಾ ಅಪ್ಲೋಡ್ ಮಾಡುವ ಕೆಲಸ ಮಾಡಿದ್ರೇ ಕ್ಷಣಾರ್ಧದಲ್ಲಿ ಅದು ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅದಕ್ಕಾಗಿ ಸೋಲು ಒಪ್ಪಿಕೊಳ್ಳುವ ಮುನ್ನ ಯುದ್ಧ ಎದುರಿಸಿ ಫಲಿತಾಂಶಕ್ಕೆ ಕಾಯಬೇಕಿದೆ.. ನಿಮ್ ಫಲಿತಾಂಶ ಏನೇ ಆಗ್ಲಿ ಆದ್ರೇ, ನೀವು ಮಾತ್ರ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ.. ವಿಶ್ವಾಸ.. ಪ್ರೀತಿ.. ನಂಬಿಕೆ ಇರಲಿ ಎನ್ನುವುದು ನಮ್ಮ ಆಶಯ ಆಗಿದೆ…