ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರ ಮತದಾನ ಡಿಲಿಟ್ ಆಗಿದೆ. ಅದಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಎಂಬಿ ಪಾಟೀಲ್ ಹೇಳಿದರು.
ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ನೇತೃತ್ವದಲ್ಲಿ ಡಿಸಿ ದಾನಮ್ಮನವರರಿಗೆ ಮನವಿ ಸಲ್ಲಿಸಿದರು. ಈ ವೇಳೆಯಲ್ಲಿ ಮಾತನಾಡಿದ ಅವರು, ಯಾವ ಕಾರಣಕ್ಕೆ ಮತದಾನ ಡಿಲಿಟ್ ಆಗಿದ್ದಾವೆ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದ್ರೇ ಕಾನೂನು ಕ್ರಮ ಜಾರಿಗೆ ಮಾಡಬೇಕು ಎಂದು ಎಂಬಿಪಿ ಒತ್ತಾಯಿಸಿದರು.
ಅಲ್ಲದೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ವಾರ್ಡ್ಗಳಲ್ಲಿ ಮತದಾನ ಕಡಿತ ಆಗಿದೆ. ಈ ಹಿನ್ನೆಲೆ ಕಾಂಗ್ರೆಸ್ ನೂತನ ಮಹಾನಗರ ಪಾಲಿಕೆ ಸದಸ್ಯರು ಮತದಾರರ ಸಂಪೂರ್ಣ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಬೇಕು. ಎಷ್ಟು ಮತದಾರರ ಹೆಸರು ಇಲ್ಲ ಎನ್ನುವುದನ್ನು ಹಿಂದಿನ ಮತದಾರರ ಪಟ್ಟಿ, ಇದೀಗಿನ್ ಮತದಾರರ ಪಟ್ಟಿ ಮ್ಯಾಚ್ ಮಾಡಿ ನೋಡಬೇಕು. ಅಂದಾಗ ಮಾತ್ರ ಎಲ್ಲವೂ ತಿಳಿದು ಬರುತ್ತದೆ ಎಂದರು.
ಇನ್ನು ಡಿಸಿ ದಾನಮ್ಮನವರ ಮಾತನಾಡಿ, ಈಗಾಗಲೇ ಜಿಲ್ಲಾಡಳಿತದಿಂದ ಮತದಾರರ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರತಿ ಮತಕ್ಷೇತ್ರದಲ್ಲಿ ಜಿಲ್ಲಾಡಳಿತ ಅಧಿಕಾರಿಗಳು, ತಹಶಿಲ್ದಾರರ, ಎಸಿ ನೇತೃತ್ವದಲ್ಲಿ ಮತದಾನ ಜಾಗೃತಿ, ಮತದಾರರ ಪಟ್ಟಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಯಾಕೆ ಇಲ್ಲ ಎನ್ನುವುದನ್ನು ನೋಡಿ ಹೆಸರು ಸೇರ್ಪಡೆ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ವೇಳೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಕಾಂಗ್ರೆಸ್ ನಾಯಕರಾದ ನಜೀರ್ ದುಂಡಿಸಿ, ಕಾಂತಾ ನಾಯಕ್, ನೂತನ ಕಾಂಗ್ರೆಸ್ ಪಾಲಿಕೆ ಸದಸ್ಯರು ಸೇರಿದಂತೆ ಕಾರ್ಯಕರ್ತರು ಇದ್ದರು.