ವಿಜಯಪುರ: ತಹಶೀಲ್ದಾರ ಹಾಗೂ ಮತದಾರರ ಮಧ್ಯೆ ಮಾತಿನ ಚಕಮಕಿ ಆಗಿರುವ ಘಟನೆ ವಿಜಯಪುರ ನಗರದ ಸಿದ್ಧೇಶ್ವರ ಕಲಾ ಮಂದಿರದ ಆವರಣದಲ್ಲಿ ನಡೆದಿದೆ.
ನಗರದ ಮತಗಟ್ಟೆ 92ರಲ್ಲಿ ಕೆಲವು ಮತದಾರರ ಮತದಾನ ಹಕ್ಕು ಇಲ್ಲ. ಅದಕ್ಕಾಗಿ ಮತದಾರರು ಹಾಗೂ ತಹಶೀಲ್ದಾರ ಸಿದ್ದು ಬೋಸಗಿ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ಆಗಿದೆ. ನಮ್ಮ ಮತದಾನ ಇಲ್ಲ. ಇದು ಕಾಣದ ಕೈಗಳ ಕೈವಾಡ ಇದೆ ಎಂದು ಮತದಾರರು ಆರೋಪಿಸಿದರು.
ಇದಕ್ಕೆ ತಹಶೀಲ್ದಾರ ಬೋಸಗಿ ಪ್ರತಿಕ್ರಿಯೆ ನೀಡಿದ್ದು, ಮತದಾನಕ್ಕೆ ಸಂಜೆ 5ರ ವರೆಗೂ ಕಾಲಾವಕಾಶ ಇದೆ. ಮತದಾರರ ಮಾಹಿತಿ ಕಲೆ ಹಾಕಿ, ಮತಕ್ಕೆ ಅವಕಾಶ ನೀಡಲಾಗುವುದು ಎಂದರು.