ಚಡಚಣ ::(ಹಲಸಂಗಿ)
ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ* ಶಾಪಗೆ ಇಬ್ಬರು ಅಪರಿಚಿತರು ಕಪ್ಪು ಬಣ್ಣದ ಜಾಕೆಟ್ , ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿಕೊಂಡು, ಕಪ್ಪು ಬಣ್ಣದ ಹೋಂಡಾ ಯೂನಿಕಾರ್ನ್ ಬೈಕ್ ಮೇಲೆ ಬಂದು, ಅಂಗಡಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಅಂಗಡಿಯ ಮಾಲೀಕನದ *ಮಹಾರುದ್ರ ತಂದೆ ಸದಾಶಿವ ಕಂಚಗಾರ*

ಈತನಿಗೆ ಗನ್ ತೋರಿಸಿ ಆತನ ಬಂಗಾರದ ಅಂಗಡಿಯಲ್ಲಿ ಇದ್ದ ಸುಮಾರು *205 ಗ್ರಾಂ ಬಂಗಾರದ ಆಭರಣ ಮತ್ತು 1 kg ಬೆಳ್ಳಿಯನ್ನು* ಕಳ್ಳತನ ಮಾಡಿದ್ದು, ಇವರು ಕಳ್ಳತನ ಮಾಡುವ ವೇಳೆಯಲ್ಲಿ ಪಕ್ಕದ ಮೊಬೈಲ್ ಅಂಗಡಿಯವನಾದ, *ಅನಿಲ್ ಬಸಣ್ಣ ಗಲಗಲಿ* ಈತನು ಇವರು ಮಾಡುವ ಕೃತ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿ

ಆ ವ್ಯಕ್ತಿಯ ಕಡೆಗೆ ಅಪರಿಚಿತ ಕಳ್ಳನು ಗುಂಡು ಹಾರಿಸಿದ್ದು ಅದು ಆ ವ್ಯಕ್ತಿಯ ಪಕ್ಕದಲ್ಲೇ ಇದ್ದ 18 ವರ್ಷದ ಯುವಕನ ಕಾಲಿಗೆ ಗುಂಡು ತಗುಲಿದೆ. ಅವನನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಿದ್ದು ಆತನು ಯಾವುದೇ ಪ್ರಾಣಾಪಾಯ ಇಲ್ಲದೆ ಆರಾಮವಾಗಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಪೊಲೀಸರು ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ



