K1N ಡೆಸ್ಕ್: ಬೇಸಿಗೆಯ ಆರಂಭವಾಗಿದೆ. ಈ ಬಿಸಿಲಿಗೆ ನಿಮ್ಮ ದೇಹವನ್ನು ನೈಸರ್ಗಿಕವಾಗಿ ತಂಪಾಗಿಸಲು ನೀವು ತರಕಾರಿಗಳನ್ನು ಸೇವಿಸಬೇಕು. ಹಾಗಿದ್ರೆ ನಮ್ಮ ದೇಹವನ್ನು ಬೇಸಿಗೆ ಬಿಸಿಗೆ ದೇಹವನ್ನು ತಂಪಾಗಿಸಲು ಈ ಆಹಾರ ಸೇವಿಸಿ ಆರೋಗವಾಗಿ ಇರಬಹುದು. ಸೌತೆಕಾಯಿ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಟಾಸ್ಯಂ, ಕೊಪ್ಪರ್ ಇವುಗಳಿಂದ ಸಮೃದ್ಧವಾಗಿರುವ ಕುಕ್ಕುಂಪರ್ ನಿಮ್ಮ ದೇಹದಲ್ಲಿನ ಜಲಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಅನೇಕ ಆರೋಗ್ಯ ಪ್ರಯೋಜನಗಳಿಂದ ತುಂಬಿದೆ. ಕಲ್ಲಂಗಡಿ ಹಣ್ಣಿನ ರಸ ಜಲಸಂಚಯನದಿಂದ ಸಮೃದ್ಧವಾಗಿದೆ. ಪ್ರತಿ ಕಪ್ ಕಲ್ಲಂಗಡಿ ರಸವು 46 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಮೊಸರು ಮತ್ತು ಜೇನುತುಪ್ಪದೊಂದಿಗೆ ಕಲ್ಲಂಗಡಿ ರಸವನ್ನು ಸೇವಿಸುವುದು ಉತ್ತಮ ಆಗಿದೆ.
ದೇಹದ ತೂಕವನ್ನು ಕಡಿಮೆ ಮಾಡಲು ಸುಲಭವಾದ ನಿಂಬೆ ಹಣ್ಣು ಜನಪ್ರಿಯವಾಗಿದೆ. ವೈಟಮಿನ್ ಸಿ, ಬಿ, ರೈಬೋಫ್ಲೆವಿನ್, ಕಲ್ಸ್ಯಂ, ಫೋಸ್ಫರಸ್, ಮ್ಯಾಗ್ನೇಷಿಯಂ ಮೊದಲಾದ ಧಾತುಗಳಲ್ಲಿ ಸಮೃದ್ಧವಾಗಿರುವ ನಿಂಬೆ ಕೊಬ್ಬನ್ನು ಕಡಿಮೆ ಮಾಡುವ ಅತ್ಯುತ್ತಮ ಆಹಾರವಾಗಿದೆ. ಅಲ್ಲದೇ, ಎಳನೀರು ಸಕ್ಕರೆ ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಉಲ್ಲಾಸದಾಯಕ ಮತ್ತು ಶಕ್ತಿಯುತ ಪಾನೀಯವಾಗಿ ಜನಪ್ರಿಯತೆಯನ್ನು ಗಳಿಸಿದೆ. ನೈಸರ್ಗಿಕ ಸಿಹಿ ಮತ್ತು ಜಲಸಂಚಯನದ ಹೊರತಾಗಿ ಎಳನೀರು ಅನೇಕ ಪ್ರಮುಖ ಪೋಷಕಾಂಶಗಳಿಂದ ತುಂಬಿದೆ.