K1N ಡೆಸ್ಕ್: ಕೋವಿಡ್ 19 ಸಂದರ್ಭದಲ್ಲಿ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ ಸಣ್ಣ ರೋಗಗಳು ಕಾಡುತ್ತವೆ. ಇದಕ್ಕೆಲ್ಲವೂ ಮನೆಯಲ್ಲಿಯೇ ಮದ್ದಿದೆ.
ಒಣ ಕೆಮ್ಮು ಮತ್ತು ಗಂಟಲು ನೋವಿಗೆ ತಾಜಾ ಪುದೀನ ಎಲೆಗಳು ಪ್ರಯೋಜನಕಾರಿ ಆಗಿದೆ. ಪುದೀನಾ ಎಲೆ, ಕಪ್ಪು ಜೀರಿಗೆಗಳನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಒಮ್ಮೆಯಾದ್ರೂ ಉಗಿ ತೆಗೆದುಕೊಳ್ಳುವುದರಿಂದ ಸಮಸ್ಯೆ ದೂರಾಗುತ್ತದೆ. ಲವಂಗ ಪುಡಿಯನ್ನು ಸಕ್ಕರೆ-ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅರಿಶಿನ, ಕೊತ್ತಂಬರಿ, ಜೀರಿಗೆ ಮತ್ತು ಬೆಳ್ಳುಳ್ಳಿ ಆಹಾರದಲ್ಲಿ ಬಳಸಬೇಕು. ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯಿರಿ. ಬಿಸಿ ನೀರು, ಗಿಡಮೂಲಿಕೆ ಚಹಾ, ಕಷಾಯವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದು ದೇಹಕ್ಕೆ ಒಳ್ಳೆಯದು.