ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಇದೇ ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಚುನಾವಣೆ-ಮತದಾನಕ್ಕೆ ಬೇಕಾಗುವ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 358 ನಾಮಪತ್ರಗಳು ಸ್ವೀಕೃತಿಯಾಗಿದ್ದು, ಪರಿಶೀಲನೆ ನಂತರ ಒಟ್ಟು 230 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು, 119 ನಾಮಪತ್ರಗಳು ತಿರಸ್ಕøತವಾಗಿವೆ. ಕ್ರಮಬದ್ಧವಾದ ಅಭ್ಯರ್ಥಿಗಳ ಪೈಕಿ ಒಟ್ಟು 56 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಅಂತಿಮವಾಗಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿ ಉಳಿದಿರುತ್ತಾರೆ. ಅವರ ಪೈಕಿ ಕಾಂಗ್ರೇಸ್-35, ಬಿ.ಜೆ.ಪಿ-33, ಜೆ.ಡಿ.ಎಸ್-20, ಎ.ಎ.ಪಿ-15, ಎ.ಆಯ್.ಎಂ.ಆಯ್.ಎಂ-04, ಕೆ.ಆರ್.ಎಸ್ ಹಾಗೂ ಜನತಾ ಪಾರ್ಟಿ ತಲಾ -3, ಎಸ್.ಡಿ.ಪಿ.ಆಯ್-02, ಬಿ.ಎಸ್.ಪಿ-01 ಮತ್ತು ಪಕ್ಷೇತರರು-58 ಅಂತಿಮ ಕಣದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ-2022 ಕ್ಕೆ ಒಟ್ಟು 303 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆ ಒಬ್ಬರಂತೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಇಬ್ಬರಂತೆ ಮತಗಟ್ಟೆ ಅಧಿಕಾರಿಗಳನ್ನ ನಿಯೋಜಿಸಲಾಗುವುದು ಹಾಗೂ ಮತಗಟ್ಟೆ ಸಿಬ್ಬಂದಿಗಳನ್ನು 20% ಹೆಚ್ಚುವರಿಯಾಗಿ ಕಾಯ್ದಿರಿಸಿದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಮತಗಟ್ಟೆ ಸಿಬ್ಬಂದಿಗಳಿಗೆ ಮೊದಲನೇ ಹಂತದ ತರಬೇತಿಯನ್ನು ದಿನಾಂಕ:16-10-2022 ರಂದು ಹಾಗೂ ಎರಡನೇ ಹಂತದ ತರಬೇತಿಯನ್ನು ದಿನಾಂಕ:23-10-2022 ರಂದು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ : ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚಿತ ಅಂದರೆ ದಿನಾಂಕ:26-10-2022 ರಂದು ಸಂಜೆ 5.00 ಗಂಟೆಯಿಂದ ದಿನಾಂಕ:28-10-2022 ರಂದು ಮದ್ಯರಾತ್ರಿ 12.00 ಗಂಟೆಯವರೆಗೆ ಎಲ್ಲ ತರಹದ ಮದ್ಯ ಮಾರಾಟ ಸಂಗ್ರಹಣೆ, ಶೇಖರಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಚುನಾವಣೆ ಜರುಗಲಿರುವ ಮತಗಟ್ಟೆಗಳ ವ್ಯಾಪ್ತಿಯ ಸುತ್ತಮುತ್ತಲಿನ 100 ಮೀಟರ ಪ್ರದೇಶವನ್ನು ದಿನಾಂಕ:26-10-2022 ರಂದು ಬೆಳಿಗ್ಗೆ 7.00 ಗಂಟೆಯಿಂದ ದಿನಾಂಕ:28-10-2022 ರಂದು ಮತದಾನ ಮುಕ್ತಾಯವಾಗುವವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮತದಾನದ ಪೂರ್ವ ದಿನ ಅಂದರೆ ದಿನಾಂಕ:27-10-2022 ಹಾಗೂ ಮತದಾನ ದಿನ ಅಂದರೆ ದಿನಾಂಕ:28-10-2022 ದಿನಗಳಂದು ನಡೆಯುವ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ವಾರ್ಡವಾರು ಮತಗಟ್ಟೆ-ಮತದಾರರ ವಿವರ : ವಾರ್ಡ ನಂ.1 ರಲ್ಲಿ 4240 ಗಂಡು, 4097 ಹೆಣ್ಣು, 2 ಸೇವಾ ಮತದಾರರು ಸೇರಿದಂತೆ ಒಟ್ಟು 8339 ಮತದಾರರಿದ್ದು, 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.2ರಲ್ಲಿ 5227 ಗಂಡು, 5413 ಹೆಣ್ಣು, 3 ಇತರೆ ಹಾಗೂ 7 ಸೇವಾ ಮತದಾರರು ಸೇರಿದಂತೆ ಒಟ್ಟು 10650 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.3ರಲ್ಲಿ 4690 ಗಂಡು, 4783 ಹೆಣ್ಣು, 1 ಇತರೆ ಹಾಗೂ 2 ಸೇವಾ ಮತದಾರರು ಸೇರಿದಂತೆ 9476 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.4ರಲ್ಲಿ 3411 ಗಂಡು, 3180 ಹೆಣ್ಣು, 3 ಸೇವಾ ಮತದಾರರು ಸೇರಿದಂತೆ 6594 ಮತದಾರರಿದ್ದು, 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.5ರಲ್ಲಿ 3353 ಗಂಡು, 3210 ಹೆಣ್ಣು, 2 ಇತರೆ ಹಾಗೂ 8 ಸೇವಾ ಮತದಾರರು ಸೇರಿದಂತೆ 6573 ಮತದಾರರಿದ್ದು, 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.6ರಲ್ಲಿ 3307 ಗಂಡು, 3273 ಹೆಣ್ಣು, 1 ಇತರೆ ಹಾಗೂ 1 ಸೇವಾ ಮತದಾರರು ಸೇರಿದಂತೆ 6582 ಮತದಾರರಿದ್ದು, 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.7ರಲ್ಲಿ 5358 ಗಂಡು, 5488 ಹೆಣ್ಣು, 4 ಇತರೆ ಮತದಾರರು ಸೇರಿದಂತೆ 10850 ಮತದಾರರಿದ್ದು, 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.8ರಲ್ಲಿ 5632 ಗಂಡು, 5672 ಹೆಣ್ಣು, 1 ಇತರೆ ಹಾಗೂ 2 ಸೇವಾ ಮತದಾರರು ಸೇರಿದಂತೆ 11307 ಮತದಾರರಿದ್ದು, 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.9ರಲ್ಲಿ 2829 ಗಂಡು, 2879 ಹೆಣ್ಣು, 1 ಇತರೆ ಹಾಗೂ 1 ಸೇವಾ ಮತದಾರರು ಸೇರಿದಂತೆ 5710 ಮತದಾರರಿದ್ದು, 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.10ರಲ್ಲಿ 2730 ಗಂಡು, 2382 ಹೆಣ್ಣು, 1 ಇತರೆ ಹಾಗೂ 4 ಸೇವಾ ಮತದಾರರು ಸೇರಿದಂತೆ 5117 ಮತದಾರರಿದ್ದು, 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.11 ರಲ್ಲಿ 4714 ಗಂಡು, 4872 ಹೆಣ್ಣು 8 ಇತರೆ ಮತದಾರರು ಸೇರಿದಂತೆ 9594 ಮತದಾರಿದ್ದು, 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.12ರಲ್ಲಿ 3716 ಗಂಡು, 3581 ಹೆಣ್ಣು, 1 ಇತರೆ ಹಾಗೂ 4 ಸೇವಾ ಮತದಾರರು ಸೇರಿದಂತೆ 7302 ಮತದಾರರಿದ್ದು, 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.13ರಲ್ಲಿ 3910 ಗಂಡು, 4155 ಹೆಣ್ಣು 1 ಇತರೆ ಹಾಗೂ 1 ಸೇವಾ ಮತದಾರರು ಸೇರಿದಂತೆ 8067 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.14ರಲ್ಲಿ 4689 ಗಂಡು, 4944 ಹೆಣ್ಣು, 1 ಇತರೆ ಹಾಗೂ 4 ಸೇವಾ ಮತದಾರರು ಸೇರಿದಂತೆ 9638 ಮತದಾರರಿದ್ದು, 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.15ರಲ್ಲಿ 1294 ಗಂಡು, 1288 ಹೆಣ್ಣು, 1 ಇತರೆ ಮತದಾರ ಸೇರಿದಂತೆ 2583 ಮತದಾರರಿದ್ದು, 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.16 ರಲ್ಲಿ 4539 ಗಂಡು, 4625 ಹೆಣ್ಣು, 1 ಇತರೆ ಹಾಗೂ 3 ಸೇವಾ ಮತದಾರರು ಸೇರಿದಂತೆ 9168 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.17ರಲ್ಲಿ 2832 ಗಂಡು, 2776 ಹೆಣ್ಣು ಮತದಾರರು ಸೇರಿದಂತೆ 5608 ಮತದಾರರಿದ್ದು, 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.18ರಲ್ಲಿ 5402 ಗಂಡು, 5660 ಹೆಣ್ಣು, 8 ಇತರೆ ಹಾಗೂ 1 ಸೇವಾ ಮತದಾರ ಸೇರಿದಂತೆ 11071 ಮತದಾರರಿದ್ದು, 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.19ರಲ್ಲಿ 4302 ಗಂಡು, 4324 ಹೆಣ್ಣು ಮತದಾರರು ಸೇರಿದಂತೆ 8626 ಮತದಾರರಿದ್ದು, 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.20ರಲ್ಲಿ 6082 ಗಂಡು, 6133 ಹೆಣ್ಣು, 3 ಇತರೆ ಮತದಾರರು ಸೇರಿದಂತೆ 12218 ಮತಾರರಿದ್ದು, 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.21ರಲ್ಲಿ 6213 ಗಂಡು, 6035 ಹೆಣ್ಣು, 2 ಇತರೆ ಹಾಗೂ 5 ಸೇವಾ ಮತದಾರರು ಸೇರಿದಂತೆ 12255 ಮತದಾರರಿದ್ದು, 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.22 ರಲ್ಲಿ 5616 ಗಂಡು, 5557 ಹೆಣ್ಣು, 7 ಇತರೆ ಹಾಗೂ 6 ಸೇವಾ ಮತದಾರರು ಸೇರಿದಂತೆ 11186 ಮತದಾರರಿದ್ದು, 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.23 ರಲ್ಲಿ 4319 ಗಂಡು, 4412 ಹೆಣ್ಣು ಹಾಗೂ 1 ಸೇವಾ ಮತದಾರ ಸೇರಿದಂತೆ 8732 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.24 ರಲ್ಲಿ 4268 ಗಂಡು, 4409 ಹೆಣ್ಣು, 3 ಇತರೆ ಮತದಾರರು ಸೇರಿದಂತೆ 8680 ಮತದಾರರಿದ್ದು, 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.25ರಲ್ಲಿ 3873 ಗಂಡು, 3913 ಹೆಣ್ಣು ಮತದಾರರು ಸೇರಿದಂತೆ ಒಟ್ಟು 7786 ಮತದಾರರಿದ್ದು, 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.26ರಲ್ಲಿ 2100 ಗಂಡು, 2151 ಹೆಣ್ಣು, 3 ಇತರೆ ಮತದಾರರು ಸೇರಿದಂತೆ 4254 ಮತದಾರರಿದ್ದು, 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.27ರಲ್ಲಿ 3126 ಗಂಡು, 3113 ಹೆಣ್ಣು, 18 ಇತರೆ ಹಾಗೂ 3 ಸೇವಾ ಮತದಾರರು ಸೇರಿದಂತೆ 6260 ಮತದಾರರಿದ್ದು, 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.28ರಲ್ಲಿ 4568 ಗಂಡು, 4661 ಹೆಣ್ಣು, 3 ಇತರೆ ಮತದಾರರು ಸೇರಿದಂತೆ 9232 ಮತದಾರರಿದ್ದು, 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.29ರಲ್ಲಿ 4723 ಗಂಡು, 4683 ಹೆಣ್ಣು, 1 ಇತರೆ ಮತದಾರರು ಸೇರಿದಂತೆ ಒಟ್ಟು 9407 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.30ರಲ್ಲಿ 4299 ಗಂಡು, 4189 ಹೆಣ್ಣು, 1 ಇತರೆ ಸೇರಿದಂತೆ 8489 ಮತದಾರರಿದ್ದು, 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.31 ರಲ್ಲಿ 4151 ಗಂಡು, 4219 ಹೆಣ್ಣು, 9 ಇತರೆ ಹಾಗೂ 2 ಸೇವಾ ಮತದಾರರು ಸೇರಿದಂತೆ 8381 ಮತದಾರರಿದ್ದು, 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.32 ರಲ್ಲಿ 3719 ಗಂಡು, 3920 ಹೆಣ್ಣು, 4 ಇತರೆ ಮತದಾರರು ಸೇರಿದಂತೆ 7643 ಮತದಾರರಿದ್ದು, 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.33 ರಲ್ಲಿ 3156 ಗಂಡು, 3156 ಹೆಣ್ಣು, 1 ಇತರೆ ಹಾಗೂ 5 ಸೇವಾ ಮತದಾರರು ಸೇರಿದಂತೆ 6318 ಮತದಾರರಿದ್ದು, 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ ನಂ.34 ರಲ್ಲಿ 3377 ಗಂಡು, 3413 ಹೆಣ್ಣು, 5 ಇತರೆ ಹಾಗೂ 1 ಸೇವಾ ಮತದಾರ ಸೇರಿದಂತೆ 6796 ಮತದಾರರಿದ್ದು, 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ ನಂ.35ರಲ್ಲಿ 3851 ಗಂಡು, 3933 ಹೆಣ್ಣು, 5 ಇತರೆ ಹಾಗೂ 7 ಸೇವಾ ಮತದಾರರು ಸೇರಿದಂತೆ ಒಟ್ಟು 7796 ಮತದಾರರಿದ್ದು, 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1,43,616 ಗಂಡು, 1,44,499 ಹೆಣ್ಣು, 100 ಇತರೆ ಹಾಗೂ 73 ಸೇವಾ ಮತದಾರರು ಸೇರಿದಂತೆ 2,88,288 ಮತದಾರರು ತಮ್ಮ ಮತವನ್ನು ಚಲಾಯಿಸಲಿದ್ದಾರೆ.
ಅಧಿಕಾರಿ-ಸಿಬ್ಬಂದಿ ನಿಯೋಜನೆ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಸಂಬಂಧಪಟ್ಟಂತೆ ಮಾದರಿ ನೀತಿ ಸಂಹಿತೆ ಪಾಲನೆ ಕುರಿತಾಗಿ ಒಟ್ಟು 21 ಸೆಕ್ಟರ್ ಅಧಿಕಾರಿಗಳನ್ನು, ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲಿಸಲು 14 ವೆಚ್ಚ ಪರಿಶೀಲನಾ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಲು 35 ಮಾಸ್ಟರ್ ಟ್ರೇನ್ರ್ಗಳನ್ನು ಹಾಗೂ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ಹೋಗಲು ಅನುಕೂಲವಾಗುವಂತೆ 60 ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಗೆ 303 ಅಧ್ಯಕ್ಷಾಧಿಕಾರಿ (ಪಿಆರ್ಓ), 303 ಸಹಾಯಕ ಅಧ್ಯಕ್ಷಾಧಿಕಾರಿ (ಎಪಿಆರ್ಓ), 606 ಮತಗಟ್ಟೆ ಅಧಿಕಾರಿಗಳು ಹಾಗೂ 242 ಕಾಯ್ದಿರಿಸಿದ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 1454 ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ವಿದ್ಯುನ್ಮಾನ ಮತಯಂತ್ರಗಳ ಬಳಕೆ :ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು. ಬ್ಯಾಲೆಟ್ ಯುನಿಟ್-303, ಕಂಟ್ರೋಲ್ ಯುನಿಟ್- 303 ಕಾಯ್ದಿರಿಸಿದ ಬಿ.ಯು-70 ಸಿ.ಯು-70 ಹೀಗೆ ಒಟ್ಟು- ಬಿ.ಯು.373, ಸಿಯು-373 ಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಂಚೆ ಮತಪತ್ರಗಳ ಬಗ್ಗೆ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಒಟ್ಟು ಸೇವಾ ಮತದಾರರು 74 ಇವರುಗಳಿಗೆ ಅಂಚೆ ಮತಪತ್ರವನ್ನು ರವಾನಿಸಲಾಗಿದೆ. ಮುಂದುವರೆದು, ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು-ಸಿಬ್ಬಂಧಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರಾಗಿದ್ದಲ್ಲಿ, ಅಂತಹ ಒಟ್ಟು 288 ಅಧಿಕಾರಿ-ಸಿಬ್ಬಂದಿಗಳಿಗೆ ಅಂಚೆ ಮತಪತ್ರಗಳನ್ನು ಆಯಾ ಚುನಾವಣಾಧಿಕಾರಿಗಳಿಂದ ರವಾನಿಸಲಾಗಿದೆ. ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕಾರ್ಯ ನಗರದ ವಿ.ಬಿ.ದರಬಾರ ಶಾಲೆಯಲ್ಲಿ ನಡೆಯಲಿದೆ.
ವಾಹನಗಳ ಬಳಕೆ: ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ತೆರಳಲು ಒಟ್ಟು ಬಸ್-24, ಮಿನಿ ಬಸ್-18 ಹಾಗೂ ಕ್ರೂಜರ್-13 ಹೀಗೆ ಒಟ್ಟು 55 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಬಹಿರಂಗ ಪ್ರಚಾರದ ಮುಕ್ತಾಯ :ವಿಜಯಪುರ ಮಹನಾಗರ ಪಾಲಿಕೆ ಚುನಾವಣೆಗೆ ಸಂಭಂಧಿಸಿದಂತೆ, ಬಹಿರಂಗ ಪ್ರಚಾರವು ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಒಳಗೆ ಬಹಿರಂಗ ಪ್ರಚಾರವನ್ನು ನಿಲ್ಲಿಸಬೇಕಾಗುತ್ತದೆ. ಮತದಾನ ಪ್ರಾರಂಭವಾಗುವ 48 ಗಂಟೆಗಳ ಮುಂಚೆ, ಅಂದರೆ ದಿನಾಂಕ:26-10-2022 ರ ಬೆಳಿಗ್ಗೆ 7.00 ಗಂಟೆಯ ನಂತರ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಯಾರೇ ಇತರ ಯಾವುದೇ ವಿಧದಲ್ಲಿ ಬಹಿರಂಗ ಪ್ರಚಾರವನ್ನು ನಡೆಸತಕ್ಕದ್ದಲ್ಲ ಅಂತಾ ಮಾನ್ಯ ರಾಜ್ಯ ಚುನಾವಣಾ ಆಯೋಗದ ನಿರ್ದೇಶನವಿದೆ.
ಮತದಾರರಲ್ಲದ ಬೆಂಬಲಿಗರು / ರಾಜಕೀಯ ಪಕ್ಷದ ಪದಾಧಿಕಾರಿಗಳು/ ಮುಖಂಡರುಗಳು / ಪಕ್ಷದ ಕಾರ್ಯಕರ್ತರು / ಮೆರವಣಿಗೆ ಕಾರ್ಯನಿರ್ವಹಿಸುವದು ಇತ್ಯಾದಿ, ಆ ನಗರ ಸ್ಥಳೀಯ ಸಂಸ್ಥೆಗಳ ವಾರ್ಡಗಳ ವ್ಯಾಪ್ತಿಯಲ್ಲಿ ತಮ್ಮ ವಾಸ್ತವ್ಯ ಮುಂದುವರೆಸಿದಲ್ಲಿ ಸದರಿಯರವನ್ನು ವಾರ್ಡ ವ್ಯಾಪ್ತಿಯಿಂದ ಹೊರಗೆ ಹೋಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಚುನಾವಣಾಧಿಕಾರಿಗಳಿಗೆ ಹಾಗೂ ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ವಾರ್ಡ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನಗಳು ಹಾಗೂ ಜನರ ಸಂಚಾರದ ಮೇಲೆ ನಿಗಾವಹಿಸಲು ಚುನಾವಣಾಧಿಕಾರಿಗಳಿಗೆ ಹಾಗೂ ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೋಲಿಸ್ ಬಂದೊಬಸ್ತ್: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಒಟ್ಟು 303 ಮತಗಟ್ಟೆಗಳ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ ಹಾಗೂ 172 ಸಾಧಾರಣ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಅತೀ ಸೂಕ್ಷ್ಮ ಮತಗಟ್ಟೆಗೆ ಒಬ್ಬ ಹೆಡ್ ಕಾನ್ಸಟೇಬಲ್ ಹಾಗೂ ಒಬ್ಬ ಪೋಲಿಸ್ ಕಾನ್ಸಟೇಬಲ್, ಸೂಕ್ಷ್ಮ ಮತಗಟ್ಟೆಗೆ ಒಬ್ಬ ಪೋಲಿಸ್ ಕಾನ್ಸಟೇಬಲ್ ಹಾಗೂ ಒಬ್ಬ ಹೋಮ್ ಗಾರ್ಡ ಮತ್ತು ಸಾಧಾರಣಾ ಮತಗಟ್ಟೆಗೆ ಒಬ್ಬ ಪೋಲಿಸ್ ಕಾನ್ಸಟೇಬಲ್ ಗಳನ್ನು ಪೋಲಿಸ್ ಇಲಾಖೆಯಿಂದ ನಿಯೋಜಿಸಲಾಗಿರುತ್ತದೆ. ಒಟ್ಟಾರೆಯಾಗಿ 03 ಡಿ.ವಾಯ್.ಎಸ್.ಪಿ, 09 ಸಿ.ಪಿ.ಆಯ್, 25 ಪಿ.ಎಸ್.ಐ, 76 ಎ.ಎಸ್.ಐ, 121 ಹೆಡ್ ಕಾನ್ಸಟೇಬಲ್, 385 ಪೋಲಿಸ್ ಕಾನ್ಸಟೇಬಲ್, 150 ಹೋಮ್ ಗಾರ್ಡ್, 04 ಆಯ್.ಆರ್.ಬಿ ಹಾಗೂ 08 ಡಿ.ಎ.ಆರ್ ಗಳನ್ನು ಪೋಲಿಸ್ ಇಲಾಖೆಯಿಂದ ನಿಯೋಜಿಸಲಾಗಿದೆ.
ಮತದಾರರನ್ನು ಗುರುತಿಸಲು ಅವರು ನೀಡಬೇಕಾದ ಗುರುತಿನ ದಾಖಲೆ: ಮತದಾರರು ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಈ ಕೆಳಕಂಡ 22 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
1.ಪಾಸ್ಪೋರ್ಟ 2. ಡ್ರೈವಿಂಗ್ ಲೈಸನ್ಸ್ 3. ಆದಾಯ ತೆರಿಗೆ ಗುರುತಿನ ಚೀಟಿ (Pಂಓ) 4. ರಾಜ್ಯ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು. 5. ಸಾರ್ವಜನಿಕ ವಲಯದ ಬ್ಯಾಂಕ್ / ಕಿಸಾನ್ ಮತ್ತು ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ. 6. ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು 7. ಭಾವಚಿತ್ರವಿರುವ ನೋಂದಾಯಿತ ಡೀಡ್ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು. 8. ಭಾವಚಿತ್ರವಿರುವ ಪಡಿತರ ಚೀಟಿಗಳು (ಖಚಿಣioಟಿ ಅಚಿಡಿಜ) 9. ಸಕ್ಷಮ ಪ್ರಾಧಿಕಾರ ನೀಡಿರುವ Sಅ/Sಖಿ/ಔಃಅ ಭಾವಚಿತ್ರವಿರುವ ಪ್ರಮಾಣ ಪತ್ರಗಳು. 10. ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು. 11. ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು. 12. ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ. 13. ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು. 14. ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್. 15. ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ. 16. ಓಖಇಉ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್. 17. ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್. 18. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು. 19. ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ. 20. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ/ಮೂಲ ಪಡಿತರ ಚೀಟಿ. 21. ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್ಗಳು (ಕಾರ್ಮಿಕ ಮಂತ್ರಾಲಯ ಯೋಜನೆ). 22. ಆಧಾರ್ ಕಾರ್ಡ ಈ ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆಗಳನ್ನು ಹಾಜರುಪಡಿಸಿ ಮತದಾರರು ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.