K1N ಡೆಸ್ಕ್: ಡ್ರ್ಯಾಗನ್ ಫ್ರೂಟ್ ಭಾರತದ ದೇಸಿ ಹಣ್ಣು. ಆದ್ರೆ ಮಾರ್ಕೆಟ್ನಲ್ಲಿ ಇದು ಎಲ್ಲರ ಕಣ್ಣು ಕುಕ್ಕುವ ಹಣ್ಣು. ಇದನ್ನ ನೋಡಿದ ತಕ್ಷಣ ಖರೀದಿಸಲು ಮನಸಾಗುತ್ತದೆ. ಆದ್ರೆ ಇದರ ಸೇವನೆಯಿಂದ ಅನೇಕ ಆರೋಗ್ಯಕರ ಉಪಯೋಗಗಳಿವೆ. ಡ್ರ್ಯಾಗನ್ ಹಣ್ಣಿನಲ್ಲಿ ಪಿಗ್ಮೆಂಟೆಡ್ ಕೆರೊಟಿನಾಯ್ಡ್ಗಳು ಮತ್ತು ವಿಟಮಿನ್ ಸಿ ಇರುವುದರಿಂದ ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸಂಶೋಧನೆಗಳ ಪ್ರಕಾರ ಡ್ರ್ಯಾಗನ್ ಫ್ರೂಟ್ನಲ್ಲಿರುವ ಬೆಟಾಸಿಯಾನಿನ್ಸ್ ಅಂಶ ಸ್ತನ ಕ್ಯಾನ್ಸರ್ನ ಕೋಶಗಳನ್ನು ಹರಡದಂತೆ ನಿಯಂತ್ರಿಸುತ್ತದೆ.
ಡ್ರ್ಯಾಗನ್ ಹಣ್ಣಿನಲ್ಲಿ ಐರನ್ ಅಂಶ ಅಧಿಕವಾಗಿರುವುದರಿಂದ ಗರ್ಭಿಣಿಯರಿಗೆ ಅನಿಮಿಯಾ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟುತ್ತದೆ. ಇದರಲ್ಲಿ ಮಿನರಲ್ಗಳಾದ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮತ್ತು ಮ್ಯಾಗ್ನಿಷಿಯಂ ಸಮೃದ್ಧವಾಗಿದೆ.
ಕೆಂಪು ಡ್ರ್ಯಾಗನ್ ಹಣ್ಣಿನಲ್ಲಿರುವ ಬೆಟಾಸಯಾನಿನ್ಗಳು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನಲ್ಲಿ ಪ್ರಯೋಜನಕಾರಿಯಾಗಿರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ಬೊಜ್ಜು ತಡೆಯುತ್ತದೆ. ಡ್ರ್ಯಾಗನ್ ಫ್ರೂಟ್ನಲ್ಲಿರುವ ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶವು ನಿಮ್ಮನ್ನು ದೀರ್ಘಕಾಲದವರೆಗೆ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಡ್ರ್ಯಾಗನ್ ಹಣ್ಣು ಸಾಮಾನ್ಯವಾಗಿ ನೋಡೋದಕ್ಕೆ ಆಕರ್ಷಿತವಾಗಿದ್ದರೂ ಕೂಡ ತಿನ್ನಲು ಕೊಂಚ ಸಪ್ಪೆ. ಆಗ ನಾವು ಡ್ರ್ಯಾಗನ್ ಹಣ್ಣಿನ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೇನು ತುಪ್ಪ ಸೇರಿಸಿ ತಿಂದರೆ ತುಂಬಾನೇ ರುಚಿಕರವಾಗಿರುತ್ತದೆ.
ಹಣ್ಣಿನ ಸಲಾಡ್ ಅಥವಾ ಮ್ಯೂಸ್ಲಿ ಜೊತೆಗೆ ಕೂಡ ಡ್ರ್ಯಾಗನ್ ಹಣ್ಣನ್ನು ಸೇರಿಸಬಹುದು. ಮೊದಲು ಒಂದು ಬೌಲ್ನಲ್ಲಿ ಸಣ್ಣದಾಗಿ ಕತ್ತರಿಸಿದ ಡ್ರ್ಯಾಗನ್ ಹಣ್ಣು ಹಾಕಿ. ನಂತರ ಅದಕ್ಕೆ ಎಲ್ಲಾ ತರಹದ ಹಣ್ಣುಗಳು, ಡ್ರೈ, ಮ್ಯೂಸ್ಲಿ, ಜೇನು ತುಪ್ಪ, ಹಾಲು ಸೇರಿಸಿ ಸೇವಿಸಬಹುದು.
ಡ್ರ್ಯಾಗನ್ ಹಣ್ಣು ಸಪ್ಪೆ ಅಂತ ಹೇಳುವವರು ಡ್ರ್ಯಾಗನ್ ಜೊತೆಗೆ ಇತರ ಹಣ್ಣುಗಳನ್ನು ಸೇರಿಸಿ ಜ್ಯೂಸ್ ತಯಾರಿಸಿ ನಂತರ ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಕೆಲಕಾಲ ಫ್ರೀಜರ್ನಲ್ಲಿ ಇಟ್ಟು ನಂತರ ಕುಡಿಯಬಹುದು. ಹೀಗೆ ಅನೇಕ ವಿಧದಲ್ಲಿ ಬಾಯಿಗೆ ರುಚಿಸುವ ಹಾಗೆ ಡ್ರ್ಯಾಗನ್ ಹಣ್ಣುನ್ನು ತಿನ್ನಬಹುದುದಾಗಿದೆ.