ವಿಜಯಪುರ:
ಬೈಕ್ ಹಾಗೂ ಟಿಪ್ಪರ ಮಧ್ಯೆ ಮುಖಾಮುಖಿ ಡಿಕ್ಕಿಯಾರುವ ಪರಿಣಾಮ ಶಿಕ್ಷಕ(ಬೈಕ್ ಸವಾರ) ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ನಗರದ ಇಟಗಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಶಿಕ್ಷಕ ವೆಂಕಟೇಶ ಕುಲಕರ್ಣಿ ಸಾವನ್ನಪ್ಪಿದವರು.
ಟಿಪ್ಪರ ವಾಹನ ಚಾಲಕ ಅಸ್ಲಾಂ ಮುಲ್ಲಾ ಹಾಗೂ ಟಿಪ್ಪರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ವಿಜಯಪುರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



