K1N ಡೆಸ್ಕ್: ಬಾಳೆಹಣ್ಣು ಮಾರುಕಟ್ಟೆಯಲ್ಲಿ 24*7 ಸಿಗುತ್ತವೆ. ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಊಟ ಅಥವಾ ಉಪಹಾರಕ್ಕೆ ಬಾಳೆಹಣ್ಣನ್ನು ಸೇರಿಸಬಹುದು. ಬಾಳೆಹಣ್ಣು ಹಲವು ಆರೋಗ್ಯಕ್ಕೆ ಪ್ರಯೋಜನ ಆಗಿದೆ. ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಆದ್ರೇ, ದಿನವನ್ನು ಬಾಳೆಹಣ್ಣಿನಿಂದ ತಯಾರಿಸಿದ ಆಹಾರದಿಂದ ಪ್ರಾರಂಭಿಸಿದರೆ ನಿಮಗಿರುವ ಮೈಗ್ರೇನ್ , ಆಮ್ಲೀಯತೆ, ಕಾಲಿನ ಸೆಳೆತ ಸಮಸ್ಯೆಯನ್ನು ನಿವಾರಿಸಬಹುದು. ಮಧ್ಯಾಹ್ನ ಊಟ ಮಾಡಲು ಸಾಧ್ಯವಾಗದಿದ್ದಾಗ ಬಾಳೆಹಣ್ಣನ್ನು ತಿನ್ನಬೇಕು. ಇದರಿಂದ ನಿಮಗೆ ಶಕ್ತಿ ಸಿಗುತ್ತದೆ. ನಿಮ್ಮ ಹೊಟ್ಟೆ ಕೂಡ ತುಂಬುತ್ತದೆ. ಹಸಿವು ಕಡಿಮೆಯಾಗಿ ಮನಸ್ಥಿತಿ ಸುಧಾರಿಸುತ್ತದೆ. ಊಟದ ವೇಳೆ ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಸಕ್ಕರೆ ಮಿಶ್ರಣ ಮಾಡಿ ಸೇವಿಸಿದರೆ ತುಂಬಾ ರುಚಿಕರವಾಗಿರುತ್ತದೆ. ಮಾತ್ರವಲ್ಲ ತಲೆನೋವು ಅಥವಾ ಮೈಗ್ರೇನ್ ನಿವಾರಣೆಯಾಗುತ್ತದೆ. ತಡರಾತ್ರಿಯ ವರೆಗೂ ಕಚೇರಿಯ ಕೆಲಸವಿದ್ದಾಗ 2 ಬಾಳೆಹಣ್ಣನ್ನು ಸೇವಿಸಿ. ಇದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಶಕ್ತಿ ಸಿಗುತ್ತದೆ.