ಸಚಿವ ಶಿವಾನಂದ ಪಾಟೀಲರಿಂದ ಬನ್ನಿ ವಿನಿಮಯ*

Karnataka 1 News
ಸಚಿವ ಶಿವಾನಂದ ಪಾಟೀಲರಿಂದ ಬನ್ನಿ ವಿನಿಮಯ*

ವಿಜಯಪುರ : ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ

ಅವರು ಶುಕ್ರವಾರ ವಿಜಯಪುರ ನಗರದ ತೋಟದ ಮನೆಯಲ್ಲಿ ಸಾರ್ವಜನಿಕ ಬನ್ನಿ ವಿನಿಮಯ ಆಚರಿಸಿದರು.

ನಗರದ ಜಮಖಂಡಿ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ
ತಮ್ಮ ತವರು ಕ್ಷೇತ್ರ ಬಸವನಬಾಗೇವಾಡಿ ಮಾತ್ರವಲ್ಲದೆ ವಿಜಯಪುರ, ಬಾಗಲಕೋಟೆ, ಹಾವೇರಿ ಜಿಲ್ಲೆಯಿಂದ ಆಗಮಿಸಿದ್ದ ಜನಸ್ತೋಮದ ಮಧ್ಯೆ ಬನ್ನಿ ವಿನಿಮಯ ಮಾಡಿಕೊಂಡು ವೈರತ್ವ ಮರೆತು ಬನ್ನಿ ತಗೊಂಡ ಬಂಗಾರದಂಗ ಇರೋಣ ಎಂಬ ಸಂದೇಶ ಸಾರಿದರು.

ಶುಕ್ರವಾರ ಬೆಳಿಗ್ಗೆಯಿಂದಲೇ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ತೋಟದ ಮನೆಯ ಆವರಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮ, ವಿವಿಧ ಮಠಾಧೀಶರು, ಮಾಜಿ ಸಚಿವರು, ಹಾಲಿ ಶಾಸಕರು, ರಾಜಕೀಯ ಗಣ್ಯರು, ಮುಖಂಡರು, ರೈತರು, ಸಾರ್ವಜನಿಕರು, ಯುವಕರು, ಮಹಿಳೆಯರು, ಬೆಂಬಲಿಗರು, ಅಭಿಮಾನಿಗಳು, ಸೇರಿದಂತೆ ಸುಮಾರು ಅರ್ಧ ಲಕ್ಷಕ್ಕೂ ಮಿಕ್ಕಿದ ಜನರು ಆಗಮಿಸಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ತಮಗೆ ಪ್ರೀತಿಯಿಂದ ದಸರಾ ಶುಭಾಶಯ ಕೋರಿದ ಸಾರ್ವಜನಿಕರಿಗೆ ಸಚಿವರೂ ಕೂಡ ಬನ್ನಿ ನೀಡಿ ವಿಜಯ ದಶಮಿ ಹಬ್ಬದ ಶುಭಾಶಯ ಕೋರಿದರು.

ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ವಿಡಿಸಿಸಿ ಬ್ಯಾಂಕ್ ನಿರ್ದೇಶಕಿತಾಗಿರುವ ಪುತ್ರು ಸಂಯುಕ್ತ ಪಾಟೀಲ, ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿರುವ ಪುತ್ರ ಸತ್ಯಜೀತ ಪಾಟೀಲ ಅವರೂ ಉಪಸ್ಥಿತರಿದ್ದು ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರ ಸೇರಿದಂತೆ ವಿಜಯಪುರ, ಹಾವೇರಿ, ಬಾಗಲಕೋಟೆ ಜಿಲ್ಲೆಯಿಂದಲೂ ಪಕ್ಷಾತೀತವಾಗಿ ಆಗಮಿಸಿದ್ದ ಜನರು ಸಚಿವ ಶಿವಾನಂದ ಪಾಟೀಲ ಅವರ ಅಭಿಮಾನಿಗಳು, ಕಾಂಗ್ರೆಸ ಮುಖಂಡರು, ಕಾರ್ಯಕರ್ತರು ಸಚಿವರೊಂದಿಗೆ ಬನ್ನಿ ವಿನಿಮಶುಭಾಶಯ ಕೋರಿದರು.

ಬನ್ನಿ ವಿನಿಮಯ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಜನರಿಗೆ ಬೆಳಿಗ್ಗೆಯಿಂದಲೇ ಉಪಹಾರ, ಮಧ್ಯಾಹ್ನ ಗೋದಿ ಹುಗ್ಗಿ ಸೇರಿದಂತೆ ವಿವಿಧ ಖಾದ್ಯಗಳ ಊಟೋಪಚಾರದ ವ್ಯವಸ್ಥೆ ನಡೆದಿತ್ತು.

ಮತ್ತೊಂದೆಡೆ, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ವಿರೇಶ ವಾಲಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದಿತ್ತು.

ರಾಜ್ಯದಲ್ಲಿ ಹಲವೆಡೆ ಅತೀವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ, ನಾಡದೇವಿ ಚಾಮುಂಡೇಶ್ವರಿ ನಾಡಿನಾದ್ಯಂತ ರೈತರಿಗೆ, ನಾಡಿನ ಜನತೆಗೆ ನೆಮ್ಮದಿ ಸುಖ ಶಾಂತಿ ಸಮೃದ್ದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

*ಶಿವಾನಂದ ಪಾಟೀಲ*
ಸಚಿವರು
ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";