K1N ಡೆಸ್ಕ್: ತುಪ್ಪ ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಆಗಿದೆ. ಆದ್ರೇ, ಕೆಲವರು ತುಪ್ಪವನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ತೂಕ ಹೆಚ್ಚಾಗುತ್ತದೆ ಎಂದು ಹೇಳ್ತಾರೆ. ಇದು 100% ಸುಳ್ಳು, ತುಪ್ಪದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಶುದ್ಧವಾದ ತುಪ್ಪ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂದು ಹೇಳ್ತಾರೆ. ಆದ್ರೇ, ತುಪ್ಪ ದೇಹದ ತೂಕ ಹೆಚ್ಚಿಸುವುದಿಲ್ಲ. ದೇಹವನ್ನು ಫಿಟ್ ಆ್ಯಂಡ್ ಫೈನ್ ಆಗಿ ಇರಿಸುತ್ತದೆ. ಅಲ್ಲದೇ, ಊಟದ ನಂತರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ತುಪ್ಪ ಸೇವಿಸುವುದರಿಂದ ಹೃದಯಾಘಾತವಾಗುತ್ತದೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಎಂದು ಹೇಳ್ತಾರೆ. ಇನ್ನೂ ದೇಸಿ ತುಪ್ಪದಲ್ಲಿ ವಿಟಮಿನ್ ಎ, ಇ, ಡಿಯಂತಹ ಅಂಶಗಳನ್ನು ಹೊಂದಿರುತ್ತದೆ. ಇದು ಕೊಬ್ಬನ್ನು ಕರಗಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ ಆಗಿದೆ.