ವಿಜಯಪುರ: ಸಿಡಿಲು ಬಡಿದು 10 ಕುರಿಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ. ಸುಬ್ಬರಾಯ ನಾಟೀಕಾರ ಎಂಬುವರ 10 ಕುರಿಗಳು ಮೃತಪಟ್ಟಿವೆ. ಜಮೀನಿನಲ್ಲಿ ಕುರಿಗಳು ಮೇಯಲು ಹೋದಾಗ ಸಿಡಿಲು ಬಡಿದು ಮೃತಪಟ್ಟಿವೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.