ವಿಜಯಪುರ: ದೇಶಾದ್ಯಂತ ಕುತೂಹಲ ಮೂಡಿಸಿರುವ ಕೇರಳ_ಸ್ಟೋರಿ ಚಿತ್ರ ಇದೀಗ್ ಉಚಿತ ವೀಕ್ಷಣೆಗೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರೇಕ್ಷಕರಿಗೆ ವ್ಯವಸ್ಥೆ ಮಾಡಿದ್ದಾರೆ. ವಿಜಯಪುರ ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಕೇರಳ_ಸ್ಟೋರಿ ಚಲನಚಿತ್ರವನ್ನು ನಾಳೆಯಿಂದ 3 ದಿನಗಳ ವರೆಗೂ (ಮೇ 16, 17 ,18) ಮಂಗಳವಾರ ಬುಧವಾರ ಹಾಗೂ ಗುರುವಾರರಂದು ಪ್ರತಿ ದಿನ ಒಂದು ಶೋ ಮಧ್ಯಾಹ್ನ 12 ರಿಂದ 3 ಗಂಟೆ ಶೋ ಮಾತ್ರ ಸಂಪೂರ್ಣ ಉಚಿತ ವೀಕ್ಷಣೆಗೆ ವ್ಯವಸ್ಥೆಯನ್ನು ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಲ್ಪಿಸಿಕೊಟ್ಟಿದ್ದಾರೆ. ವಿಶೇಷವಾಗಿ ಎಲ್ಲ ಸಹೋದರಿಯರು ಹಾಗೂ ಸಹೋದರರು ತಪ್ಪದೆ ಈ ಚಿತ್ರವನ್ನು ವೀಕ್ಷಣೆ ಮಾಡಲು ಶಾಸಕ ಯತ್ನಾಳರು ವಿನಂತಿಸಿಕೊಂಡಿದ್ದಾರೆ.