K1N ಡೆಸ್ಕ್: ಇಂಗ್ಲೆಂಡ್ನ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ ಕಾರು ಅಪಘಾತ ಆಗಿದೆ. ಅದಕ್ಕಾಗಿ ತಕ್ಷಣವೇ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಲಭ್ಯವಾಗಿದೆ.
ಇನ್ನು ಟಾಪ್ ಗೇರ್ ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣದ ಸಂದರ್ಭದಲ್ಲಿ ಫ್ಲಿಂಟಾಫ್ ಅವರ ಕಾರು ಅಪಘಾತ ಆಗಿದ್ದು, ಅವರು ಗಾಯಗೊಂಡಿದ್ದಾರೆ. ಸೆಟ್ನಲ್ಲಿದ್ದ ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.