ನವದೆಹಲಿ: ಸುಪ್ರೀಂ ಕೋರ್ಟ್ ನೋಟ್ ಬ್ಯಾನ್ ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠದಿಂದ ಮಹತ್ವದ ತೀರ್ಪು ನೀಡಿದೆ. 2016ರ ನವೆಂಬರ್ 8ರಂದು ನೋಟ್ ಬ್ಯಾನ್ ಆಗಿತ್ತು. ಮೋದಿ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ತೀರ್ಪು ನೀಡಿದೆ. RBI ಮತ್ತು ಸರ್ಕಾರದ ನಡುವೆ ಚರ್ಚೆಯಾಗಿದೆ. ನೋಟ್ ಬ್ಯಾನ್ ಮಾಡಿರುವುದು ಕಾನೂನು ಬಾಹಿರವಲ್ಲ. ನೋಟ್ ಬ್ಯಾನ್ ವೇಳೆ ಕೊಟ್ಟ ಕಾಲಾವಕಾಶ ಸರಿಯಿದೆ. ನೋಟ್ ಬ್ಯಾನ್ ಪ್ರಶ್ನಿಸಿದ್ದ 58 ಅರ್ಜಿಗಳು ವಜಾಗೊಳಿಸಿದೆ. ಪಂಚ ಪೀಠದ ನ್ಯಾಯಮೂರ್ತಿ ಗವಾಯಿರಿಂದ ತೀರ್ಪು ನೀಡಿದ್ದಾರೆ.