ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್ಗೆ ಮಹಾಪೌರರ ಆದೇಶದಂತೆ ಉಪಮಹಾಪೌರ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಪ್ರಮುಖವಾಗಿ ನಗರದ ಹಸರೀಕರಣಕ್ಕಾಗಿ ಹಾಗೂ ನಗರದ ಸರ್ವತೋಮುಖ ಅಭಿವೃದ್ದಿಗಾಗಿ ಪಾಲಿಕೆಯ ಆದ್ಯ ಸೇವೆಗಳಾದ ರಸ್ತೆ, ಒಳಚರಂಡಿ, ಮಳೆ ನೀರು ಚರಂಡಿ, ಬೀದಿ ದೀಪ ನಿರ್ವಹನೆ, ಕಸವಿಲೇವಾರಿ ಹಾಗೂ ನೀರು ಸರಬರಾಜುವಿಗಾಗಿ ಅನುದಾನ ಕಾಯ್ದಿರಿಸಲಾಗಿದೆ. ಪ್ರಮುಖವಾಗಿ ಸ್ಮಶಾನಗಳ ಅಭಿವೃದ್ದಿ ಹಾಗೂ ವಿದ್ಯುತ್ ಚಿತಾಗಾರಗಳಿಗೆ ಒಟ್ಟು ರೂ.15942.33 ಲಕ್ಷ ರೂ.ಗಳ ಅನುದಾನ ಕಾಯ್ದಿರಿಸಿ ಒಟ್ಟು 13.94 ಲಕ್ಷ ರೂ.ಗಳ ಉಳಿತಾಯ ಬಜೆಟ್ನ್ನು ಮಂಡಿಸಲಾಗಿಗಿದೆ.
ಆಯ-ವ್ಯಯದಲ್ಲಿ ಪ್ರಮುಖವಾಗಿ ರಾಜಸ್ವ ಸ್ವೀಕೃತಿಗಳ ಮೂಲಕ ಆಸ್ತಿ ತೆರಿಗೆ, ಕಟ್ಟಡಗಳ ಸಂಬಂಧಿತ ಶುಲ್ಕಗಳು, ಘನತ್ಯಾಜ್ಯ ವಿಲೇವರಿ ಶುಲ್ಕ ಇನ್ನೀತರೆ ಸ್ವಂತ ನಿಧಿಯನ್ನೊಳಗೊಂಡು ಒಟ್ಟು ರೂ. 10738.99 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.
ಬಂಡವಾಳ ಸ್ವೀಕೃತಿ ಮೂಲಕ ರೂ.2652.02 ಲಕ್ಷಗಳ ವಿವಿಧ ಅನುದಾನಗಳನ್ನು ನಿರೀಕ್ಷಿಸಲಾಗಿದ್ದು, ಅಸಾಧಾರಣ ಆದಾಯಗಳ ಮೂಲಕ ರೂ.2525.00 ಲಕ್ಷಗಳು ಹೀಗೆ ಒಟ್ಟು ರೂ. 15956.14 ಲಕ್ಷಗಳ ಆದಾಯದೊಂದಿಗೆ ಪ್ರಮುಖ ವೆಚ್ಚಗಳಲ್ಲಿ ರಾಜಸ್ವ ಪಾವತಿಗಳು ರೂ.9945.73 ಲಕ್ಷ, ಬಂಡವಾಳ ಪಾವತಿಗಳು ರೂ.3471.47 ಲಕ್ಷ ಹಾಗೂ ಅಸಾಧಾರಣ ಪಾವತಿಗಳಲ್ಲಿ ರೂ.2525.00 ಲಕ್ಷಗಳು ಸೇರಿದಂತೆ ಒಟ್ಟು ರೂ.15942.33 ಲಕ್ಷಗಳ ಪಾವತಿಗಳನ್ನು ಅಂದಾಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸೌದಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.