ವಿಜಯಪುರ: ವಿಜಯಪುರ 110/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಸಿಎಲ್ ವತಿಯಿಂದ 2*10 ಎಂ.ವಿ.ಎ. ಶಕ್ತಿ ಪರಿವರ್ತಕ ಬದಲು 2*20 ಎಂ.ವಿ.ಎ. ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಫೆ.18ರಂದು ಕೈಗೊಳ್ಳುವುದರಿಂದ ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸದರಿ ವಿದ್ಯುತ್ ಕೇಂದ್ರದಿಂದ ವಿತರಿಸಲ್ಪಡುವ 11ಕೆವ್ಹಿ ಬಡಿಕಮಾನ, ಮಿನಾಕ್ಷಿ ಚೌಕ ಹಾಗೂ ಪವರ್ ಹೌಸ್, ಹೊರಡುವ 11 ಕೆವ್ಹಿ ಫೀಡರ್ಗಳ ಮೇಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.