ವಿಜಯಪುರ; ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್
ಅಭ್ಯರ್ಥಿ ರಾಜು ಆಲಗೂರ ಹೆಸರಲ್ಲಿ 5 ಲಕ್ಷ ರೂ.ನಗದು, ಬ್ಯಾಂಕ್ ಠೇವಣಿ, ಹೂಡಿಕೆ, ಎರಡು ವಾಹನ, 5.84 ಲಕ್ಷ ರೂ.ಮೌಲ್ಯದ 80 ಗ್ರಾಂ ಬಂಗಾರ ಸೇರಿದಂತೆ 91,74,326 ರೂ.ಮೌಲ್ಯದ ಚರಾಸ್ತಿ ಇದೆ. ಸ್ಥಿರಾಸ್ತಿ: ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ಮನೆ, ವಾಣಿಜ್ಯ ಕಟ್ಟಡ (ಅಪಾರ್ಟ್ಮೆಂಟ್) ಒಳಗೊಂಡಂತೆ ಒಟ್ಟು 4,54,87,500 ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೇ, ಪತ್ನಿ ಸಾವಿತ್ರಿ ಹಣಮಂತರಾವ ಆಲಗೂರ ಹೆಸರಲ್ಲಿ: ಚರಾಸ್ತಿ: 2 ಲಕ್ಷ ರೂ.ನಗದು, ಹೂಡಿಕೆ, ಠೇವಣಿ, ಮೂರು ವಾಹನ, 230 ಗ್ರಾಂ ಚಿನ್ನ (16.79 ಲಕ್ಷ) ಸೇರಿದಂತೆ 1,67,80,894 ರೂ.ಮೌಲ್ಯದ ಚರಾಸ್ತಿ ಇದೆ. ಸ್ಥಿರಾಸ್ತಿ: ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ಹೋಟೆಲ್ ಸೇರಿದಂತೆ ಒಟ್ಟು 6,85,25,000 ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.